ಮೊಬೈಲ್ ನಲ್ಲಿ ಕನ್ನಡ ಅಕ್ಷರಗಳಿಗೆ stylish fonts ಕೊಡುವ ವಿಧಾನ

ನಮಸ್ಕಾರ ಸ್ನೇಹಿತರೆ, ಈ ಲೇಖನದಲ್ಲಿ ಕನ್ನಡ ಅಕ್ಷರಗಳಿಗೆ ಸ್ಟೈಲಿಶ್ ಪಾಂಟ್ಸ್ ಅನ್ನು ಹೇಗೆ ಕೊಡಬಹುದು ಎಂದು ಹೇಳಿಕೊಡುತಿದ್ದೇವೆ. ಹೌದು ಸ್ನೇಹಿತರೆ ಕನ್ನಡದ ಯಾವುದೇ ಅಕ್ಷರಗಳಿಗೆ ನಿಮ್ಮ ಮೊಬೈಲ್ ನಲ್ಲಿ ಪಾಂಟ್ಸ್ ಅನ್ನು ಚೆಂಜ್ ಮಾಡಬಹುದು. ನಿಮಗೆ ಗೊತ್ತಿರಬಹುದು ಸ್ನೇಹಿತರೆ ಯಾವುದೇ ಪೊಟೊ ಎಡಿಟಿಂಗ್ ಅಪ್ಲಿಕೇಷನ್ ನಲ್ಲಿ ನಾವು ಯಾವುದೇ ಪೊಟೊಗಳಲ್ಲಿ ಕನ್ನಡ ಅಕ್ಷರಗಳಿಗೆ ಪಾಂಟ್ಸ್ ಚೆಂಜ್ ಮಾಡಲು ಆಗುವುದಿಲ್ಲ. ಆದರೆ ಇಂಗ್ಲಿಷ್ ನಲ್ಲಿ ಇರುವ ಯಾವುದೇ ಅಕ್ಷರಗಳಿಗೆ ಪಾಂಟ್ಸ್ ಚೆಂಜ್ ಮಾಡಲು ಸಾಧ್ಯವಾಗಿರುತ್ತದೆ ಮತ್ತು ಯಾವುದೇ ಅಪ್ಲಿಕೇಶನ್ ನಲ್ಲಿ ಕೂಡ ಇದು ಸಾಧ್ಯವಾಗಿರುತ್ತದೆ. ಹಾಗಾದರೆ ಸ್ನೇಹಿತರೆ ಅದನ್ನು ಮಾಡುವುದು ಹೇಗೆ ಎಂದು ತಿಳಿಯೋಣ ಬನ್ನಿ.

ಸ್ನೇಹಿತರೆ ನೀವು ಮೊದಲು ಮಾಡಬೇಕಾಗಿರುವುದು ಪ್ಲೆ ಸ್ಟೊರ್ ನಲ್ಲಿ ಹೋಗಿ PixelLab ಅನ್ನುವ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಹಾಗೆಯೇ ಕನ್ನಡದ ತುಂಬಾ ಪಾಂಟ್ಸ್ ಇರುವ Kannada fonts zip file ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಹಾಗೆಯೇ ಒಂದು ವೆಬ್‌ಸೈಟ್ ಅನ್ನು  ಕೂಡ ಯುಸ್ ಮಾಡಬೇಕಾಗುತ್ತದೆ Aravindavk. In ಇದೆಲ್ಲದರ ಲಿಂಕ್ ನಿಮಗೆ ಲೇಖನದ ಕೆಳಗೆ ಕೊನೆಯಲ್ಲಿ ಸಿಗುತ್ತದೆ.

ಹಂತ ೧ :

ಸ್ನೇಹಿತರೆ ಮೊದಲು ನೀವು Kannada fonts zip file ಡೌನ್‌ಲೋಡ್ ಮಾಡಿ ಅದನ್ನು copy ಅಥವಾ extract   ಮಾಡಿ ಅದನ್ನು ನಿಮ್ಮ internal storage ನಲ್ಲಿ paste ಮಾಡಬೇಕಾಗುತ್ತದೆ. ಸ್ನೇಹಿತರೆ ನೀವು ಡೌನ್‌ಲೋಡ್ ಮಾಡಿದ Kannada fonts zip file ನಿಮ್ಮ ಮೊಬೈಲ್ ನಲ್ಲಿ File Manager ಆಪ್ ನಲ್ಲಿ archive ಅನ್ನುವ ಪೊಲ್ಡರ್ ನಲ್ಲಿ ಇರುತ್ತದೆ. ಇವಿಷ್ಟು ಕೆಲಸವನ್ನು ಮಾಡಿ ಮುಂದಿನ ಹಂತದಲ್ಲಿ ಎನು ಮಾಡಬೇಕಂತ ತಿಳಿಯೋಣ ಬನ್ನಿ. 


ಹಂತ ೨ :

ಸ್ನೇಹಿತರೆ, ನಂತರ ನೀವು pixellab ಆಪ್ ಅನ್ನು ಒಪನ್ ಮಾಡಿ fonts Option ಅನ್ನು ಸೆಲೆಕ್ಟ್ ಮಾಡಬೇಕಾಗುತ್ತದೆ. ಅಲ್ಲಿ ನಿಮಗೆ fonts, my fonts ಒಪ್ಷನ್ ಇರುತ್ತದೆ ನೀವು my fonts ಒಪ್ಷನ್ ಅನ್ನು ಸೆಲೆಕ್ಟ್ ಮಾಡಬೇಕಾಗುತ್ತದೆ. ನಂತರ ಅಲ್ಲಿ ನಿಮಗೆ file manager ತರ ಒಂದು icon ಇರುತ್ತದೆ, ಅದನ್ನು ನೀವು ಸೆಲೆಕ್ಟ್ ಮಾಡಬೇಕಾಗುತ್ತದೆ. 

ಅಲ್ಲಿ ಸೆಲೆಕ್ಟ್ ಮಾಡಿದ ಮೇಲೆ ನೀವು file manager ನಲ್ಲಿ extract ಅಥವಾ copy ಮಾಡಿ ಪೆಸ್ಟ್ ಮಾಡಿರುವ Kannada font zip file ಅನ್ನುವ ಪೊಲ್ಡರ್ ಅನ್ನು ಹುಡುಕಿ ಸೆಲೆಕ್ಟ್ ಮಾಡಬೇಕಾಗುತ್ತದೆ. ಸೆಲೆಕ್ಟ್ ಮಾಡಿದ ಮೇಲೆ ಕೆಳಗೆ ಒಂದು ಒಪ್ಷನ್ ಇರುತ್ತದೆ, Add to dictionary ಅಂತಾ, ಅದನ್ನು ಸೆಲೆಕ್ಟ್ ಮಾಡಿದ ಮೇಲೆ Kannada font zip file ಈ ಆಪ್ ನಲ್ಲಿ add ಆಗಿರುತ್ತದೆ.

ಇವಿಷ್ಟು ಕೆಲಸ ಮಾಡಿದ ಮೇಲೆ ಮುಂದಿನ ಹಂತದಲ್ಲಿ ಕನ್ನಡ ಅಕ್ಷರಗಳಿಗೆ ಸ್ಟೈಲಿಶ್ ಪಾಂಟ್ಸ್ ಚೆಂಜ್ ಮಾಡುವ ವಿಧಾನವನ್ನು ತಿಳಿಯೋಣ ಬನ್ನಿ.

ಹಂತ ೩

ಸ್ನೇಹಿತರೆ, ಆಮೇಲೆ ನೀವು ಕೆಳಗೆ ಕೊಟ್ಟಿರುವ ಲಿಂಕ್ Aravindavk . In ವೆಬ್‌ಸೈಟ್ ನಲ್ಲಿ ಹೋಗಿ ಅಲ್ಲಿ ನೀವು ಯಾವ ಅಕ್ಷರಗಳಿಗೆ ಪಾಂಟ್ ಚೆಂಜ್ ಮಾಡಬೇಕು ಅಂತಾ ಅಂದುಕೊಂಡಿರ್ತಿರೊ ಆ ಅಕ್ಷರಗಳನ್ನು ASCII to Unicode ಆಪ್ಷನ್ ಇರುತ್ತದೆ ಅಲ್ಲಿ ಬರೆಯಬೇಕಾಗುತ್ತದೆ. 

ನಂತರ ಅಲ್ಲಿ ಆಪ್ಷನ್ ಇರುತ್ತದೆ  Unicode to ASCII ಅಂತಾ ಅದರ ಮೇಲೆ ಕ್ಲಿಕ್ ಮಾಡಿದ ಮೇಲೆ ಒಂದು ಕೋಡ್ ಸಿಗುತ್ತದೆ ಆ ಕೋಡ ಅನ್ನು ಕಾಪಿ ಮಾಡಬೇಕಾಗುತ್ತದೆ. ಕಾಪಿ ಮಾಡಿ ಅದನ್ನು  pixellab ಅಪ್ಲಿಕೇಷನ್ ನಲ್ಲಿ ತರಬೇಕಾಗುತ್ತದೆ.

 

ಹಂತ ೪ :

ಆಮೇಲೆ ನೀವು pixellab ಒಪನ್ ಮಾಡಿ ಯಾವುದೇ ಇಮೇಜ್ ನಲ್ಲಿ ಆ ಕೋಡ್ ಅನ್ನು ಪೆಸ್ಟ್ ಮಾಡಬೇಕಾಗುತ್ತದೆ. ನಂತರ fonts ಆಪ್ಷನ್ ಮೇಲೆ ಹೊದಾಗ ಅಲ್ಲಿ my fonts ಆಪ್ಷನ್ ಸೆಲೆಕ್ಟ್ ಮಾಡಿದಾಗ  ಅಲ್ಲಿ ನೀವು import ಮಾಡಿರುವ Kannada fonts zip file ನಲ್ಲಿರುವ ಎಲ್ಲಾ ಕನ್ನಡದ ಸ್ಟೈಲಿಶ್ ಪಾಂಟ್ಸ್ ಗಳು ಕಾಣಸಿಗುತ್ತವೆ.

100 ಕ್ಕೂ ಹೆಚ್ಚು ಸ್ಟೈಲಿಶ್ ಪಾಂಟ್ಸ್ ಗಳನ್ನು ನೀವು ಅಲ್ಲಿ ಕಾಣಬಹುದು. ನೀವು ಯಾವುದೇ ಪಾಂಟ್ಸ್ ಬೇಕಾದರೂ ಸೆಲೆಕ್ಟ್ ಮಾಡಿ ಯಾವುದೇ ಇಮೇಜ್ ಗಳಲ್ಲಿ ಬೇಕಾದರು ಹಾಕಬಹುದು.


ಸ್ನೇಹಿತರೆ ಈ ಲೇಖನದಲ್ಲಿ ಎನಾದರು ಅರ್ಥವಾಗದ ಇರುವ ವಿಷಯ ಇದ್ದರೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ತಿಳಿಸಿ. ನೀವು ಡೌನ್‌ಲೋಡ್ ಮಾಡಬೇಕಿರುವ ಆಪ್ ಲಿಂಕ್ ಗಳು, ಹಾಗೂ ವೆಬ್‌ಸೈಟ್ ಲಿಂಕ್ ಕೆಳಗೆ ಕೊಡಲಾಗಿದೆ ಡೌನ್‌ಲೋಡ್ ಮಾಡಿಕೊಳ್ಳಿ ಧನ್ಯವಾದ.


Pixellab App : DOWNLOAD NOW

Kannada font zip file : DOWNLOAD NOW

Aravindavk website : Go to websitePost a Comment

2 Comments