Aadhaar-voter ID link: ಆಧಾರ್‌ಗೆ ವೋಟರ್‌ ಐಡಿ ಹೀಗೆ ಲಿಂಕ್ ಮಾಡಿ

ನಮಸ್ಕಾರ ಸ್ನೇಹಿತರೆ ಮಸ್ತ್ ಆಫ್ ಸೈಟ್ ಗೆ ಮತ್ತೊಮ್ಮೆ ಸ್ವಾಗತ, ಸ್ನೇಹಿತರೆ ಈ ಲೇಖನದಲ್ಲಿ ನಿಮ್ಮ ವೋಟಿಂಗ್ ಕಾರ್ಡ್ ಗೆ ಆಧಾರ್ ಕಾರ್ಡನ್ನ ಹೇಗೆ ಲಿಂಕ್ ಮಾಡೋದು ಅಂತ ಈ ಒಂದು ಲೇಖನದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ. ವೋಟಿಂಗ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಈಗಿನ ನಿಯಮದಲ್ಲಿ ಕಡ್ಡಾಯವಾಗಿದೆ. ಅದಕ್ಕೋಸ್ಕರ ನೀವು ವೋಟಿಂಗ್ ಕಾರ್ಡ್ ಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಲೇಬೇಕಾಗಿದೆ.

ಚುನಾವಣಾ ಆಯೋಗವು ದೇಶಾದ್ಯಂತ ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವ ಅಭಿಯಾನವನ್ನು ಪ್ರಾರಂಭಿಸಿದೆ.  ಅಸ್ಪಷ್ಟ ಮತದಾನವನ್ನು ತಡೆಗಟ್ಟಲು ಚುನಾವಣಾ ಆಯೋಗವು ಈ ಉಪಕ್ರಮವನ್ನು ಪ್ರಾರಂಭಿಸಿದೆ.  ವೋಟರ್ ಐಡಿಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಚುನಾವಣಾ ಆಯೋಗವು ಮಾರ್ಚ್ 31, 2023 ರ ಗಡುವನ್ನು ನಿಗದಿಪಡಿಸಿದೆ.  

ಅಂತಹ ಪರಿಸ್ಥಿತಿಯಲ್ಲಿ, ನೀವು ಇನ್ನೂ ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಈಗಲೇ ಈ ಕೆಳಗಿನ ಸ್ಟೆಪ್  ಅನುಸರಿಸಿ.  ಒಳ್ಳೆಯ ವಿಷಯವೆಂದರೆ ಮತದಾರರ ಗುರುತಿನ ಚೀಟಿಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ನೀವು ಎಲ್ಲಿಯೂ ಹೋಗಬೇಕಾಗಿಲ್ಲ.  ಮೊಬೈಲ್ ಫೋನ್ ಸಹಾಯದಿಂದ ನೀವು ಅದನ್ನು ಮನೆಯಲ್ಲಿಯೇ ಕುಳಿತು ಸುಲಭವಾಗಿ ಲಿಂಕ್ ಮಾಡಬಹುದು. 

ಸ್ನೇಹಿತರೆ ಕೆಳಗೆ ಕೊಡಲಾದ Download Now ಲಿಂಕ್ ಮೇಲೆ ಓಕೆ ಮಾಡಿ ಆಪ್ ಅನ್ನು ಡೌನ್ಲೋಡ್ ಮಾಡಬೇಕು ಅದರ ಹೆಸರು ವೋಟರ್ ಹೆಲ್ಪ್ ಲೈನ್ ಅಂತ.

ಅಪ್ಲಿಕೇಶನ್ ಓಪನ್ ಮಾಡಿದ ನಂತರ ಪಸ್ಟ್ ಪೇಜ್ ನಲ್ಲಿ Voter registration ಆಪ್ಷನ್ ಮೇಲೆ ಓಕೆ ಮಾಡಬೇಕು.

ಈಗ ಹೊಸ ಪೇಜ್ ಓಪನ್ ಆದಮೇಲೆ ಕೆಳಗೆ ಲಾಸ್ಟ್ ಅಲ್ಲಿ 6B Form ಅಂತ ಆಪ್ಷನ್ ಇರುತ್ತದೆ, ಅದರ ಮೇಲೆ ಕ್ಲಿಕ್ ಮಾಡಬೇಕು.

ಈಗ ಬೇರೆ ಪೇಜ್ ಓಪನ್ ಆಗಿ Let's start ಅಂತ ಆಪ್ಷನ್ ಮೇಲೆ ಓಕೆ ಮಾಡಬೇಕು

ಈಗ ಬರುವ ಪೇಜ್ ನಲ್ಲಿ ಮೊಬೈಲ್ ನಂಬರ್ ಹಾಕಬೇಕು, ನಂತರ ನಿಮ್ಮ ನಂಬರಿಗೆ ಒಂದು ಓಟಿಪಿ ಬರುತ್ತದೆ ಅದನ್ನು ಹಾಕಿ ವೆರಿಫೈಡ್ ಮಾಡಬೇಕಾಗುತ್ತದೆ.

ನಂತರ ಬೇರೆ ಪೇಜ್ ಓಪನ್ ಆಗುತ್ತದೆ ಅದರಲ್ಲಿ ಒಂದು ಪ್ರಶ್ನೆ ಇರುತ್ತದೆ ನಿಮ್ಮ ಹತ್ತಿರ ಮೊದಲೇ ವೋಟಿಂಗ್ ಕಾರ್ಡ್ ಇದೆಯಾ ಎಂಬ ಪ್ರಶ್ನೆಗೆ ನೀವು Yes ಅಂತ ಟಿಕ್ ಮಾಡಿ ಕೆಳಗೆ ಕಾಣುವ Next ಆಪ್ಷನ್ ಓಕೆ ಮಾಡಬೇಕು.

ಬೇರೆ ಪೇಜ್ ಓಪನ್ ಆಗುತ್ತದೆ ನೀವು ಅದರಲ್ಲಿ ವೋಟರ್ ಐಡಿಯಾ ನಂಬರನ್ನ ಹಾಕಬೇಕು ಮತ್ತು ಕೆಳಗೆ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಬೇಕು ನಂತರ ಕೆಳಗೆ ಕಾಣುವ Proceed ಆಯ್ಕೆಯನ್ನು ಓಕೆ ಮಾಡಬೇಕು.

ನಂತರ ನೀವು ನಿಮ್ಮ ಮೊಬೈಲ್ ನಲ್ಲಿ ನಿಮ್ಮ ವೋಟರ್ ಐಡಿಯನ್ನು ಕಾಣಬಹುದು, ಹಾಗೆ ಅಲ್ಲಿ ಕೆಳಗೆ ಕಾಣುವ ನೆಕ್ಸ್ಟ್ ಆಯ್ಕೆ ಮೇಲೆ ಓಕೆ ಮಾಡಬೇಕು.

ಈಗ ಒಂದು ದೊಡ್ಡ ಫಾರ್ಮ್ ಓಪನ್ ಆಗುತ್ತದೆ ಎಲ್ಲಾ ಡೀಟೇಲ್ಸ್ ಮಾಡಬೇಕು ಆಧಾರ್ ಕಾರ್ಡ್ ನಂಬರ್, ಮೊಬೈಲ್ ನಂಬರ್ ಹಾಕಿ ಕೆಳಗೆ ಕಾಣುವ ಡೆನ್ ಬಟನ್ ಓಕೆ ಮಾಡಬೇಕು.

ನಂತರ ನಿಮಗೆ ಒಂದು ನೋಟಿಫಿಕೇಶನ್ ಸ್ಕ್ರೀನ್ ನಲ್ಲಿ ಬರುತ್ತದೆ Your application has been submitted successfully 

ನಂತರ ನೀವು ವೋಟಿಂಗ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲಾಗಿದೆ ಎಂದು ಅರ್ಥಮಾಡಿಕೊಳ್ಳಬಹುದು.

Link ಆಗಿದ್ಯಾ ಇಲ್ವಾ ಅಂತ ಚೆಕ್ ಮಾಡಲು ಅದೇ ನೋಟಿಫಿಕೇಶನ್ ನಲ್ಲಿ reference ID ಇರುವುದು, ಅದನ್ನು ನೆನಪಿಟ್ಟುಕೊಂಡು ಅದರ ಮೂಲಕ ನೀವು ಎಲ್ಲಿ ಬೇಕಾದರೂ ಚೆಕ್ ಮಾಡಬಹುದು.







Post a Comment

0 Comments