ವಿಡಿಯೋಗಳಲ್ಲಿ ಕನ್ನಡ ಅಕ್ಷರಗಳಿಗೆ stylish fonts ಕೊಡುವ ವಿಧಾನ | kannada stylish fonts copy paste

ನಮಸ್ಕಾರ ಸ್ನೇಹಿತರೆ ಮಸ್ತ್ ಆಪ್ಸ್ ಬ್ಲಾಗ್ ಗೆ ಸ್ವಾಗತ, ನೀವು ಯೂಟ್ಯೂಬರ್ ಆಗಿದ್ದರೆ, ಅಥವಾ ಯಾವುದೇ ಒಂದು ಪ್ಲಾಟ್ಫಾರ್ಮ್ ನಲ್ಲಿ ವಿಡಿಯೋ ಕ್ರಿಯೇಟ್ ಮಾಡಿದ್ದರೆ, ನೀವು ಅದರಲ್ಲಿ ಟೆಕ್ಸ್ಟ್ Add ಮಾಡಿರುತ್ತೀರಿ, ಆದರೆ ನಿಮಗೆ ಕನ್ನಡದಲ್ಲಿ ಇರುವ ಅಕ್ಷರಗಳಿಗೆ Stylish fonts ಅನ್ನ ಕೊಡುವುದಕ್ಕೆ ಆಗಲ್ಲ. ಆದರೆ ಈ ಲೇಖನದಲ್ಲಿ ಯಾವುದೇ ವಿಡಿಯೋ ಆಗಿರಲಿ, ಅದರಲ್ಲಿ ನೀವು ಆಡ್ ಮಾಡುವ ಕನ್ನಡ ಅಕ್ಷರಗಳಿಗೆ ಸ್ಟೈಲಿಶ್ ಪೌಂಡ್ಸ್ ಅನ್ನು ಹೇಗೆ ಕೊಡುವುದು ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ.
ಹೌದು ಸ್ನೇಹಿತರೆ ನಿಮ್ಮ ಹತ್ತಿರ ಕಂಪ್ಯೂಟರ್ ಇಲ್ಲದಿದ್ದರೂ ನೀವು ಈ ಕೆಲಸವನ್ನು ನೀವು ಉಪಯೋಗಿಸುವ ಸ್ಮಾರ್ಟ್ ಫೋನ್ ನಲ್ಲಿ ಮಾಡಬಹುದು. ಈ ಪೋಸ್ಟನ್ನು ನೀವು ಸಂಪೂರ್ಣವಾಗಿ ಓದಿದರೆ, ಎಲ್ಲವನ್ನು ನೀವು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಮೊಬೈಲ್ ನಲ್ಲಿ ಕನ್ನಡ ಅಕ್ಷರಗಳಿಗೆ stylish fonts ಅನ್ನು ಹೇಗೆ ಕೊಡುವುದು ಎಂಬ ಪ್ರಶ್ನೆಗಳಿಗೆ ಈ ಲೇಖನವನ್ನು ಕೊನೆತನಕ ಒದಲು ಮರೆಯದಿರಿ. 

100 kannada fonts download 


ಸ್ನೇಹಿತರೆ ಕನ್ನಡ ಅಕ್ಷರಗಳಿಗೆ ನಿಮ್ಮ ಮೊಬೈಲ್ ನಲ್ಲಿ ಸ್ಟೈಲಿಶ್ ಪೌಂಡ್ಸ್ ಅನ್ನು ಕೊಡೋಕೆ ನೀವು ಏನು ಮಾಡಬೇಕೆಂದರೆ ಒಂದು ಅಪ್ಲಿಕೇಶನ್ ಹಾಗು ಒಂದು ವೆಬ್ ಸೈಟನ್ನು ಉಪಯೋಗಿಸಬೇಕಾಗುತ್ತದೆ. ನಂತರ ಕನ್ನಡದ ಪಾಂಟ್ಸ್ಗಳು ಇರುವ ಒಂದು ಜಿಪ್ ಫೈಲ್ ಇರುತ್ತದೆ ಅದರಲ್ಲಿ ನಿಮಗೆ 100+ Kannada Stylish fonts download  ಗಳು ಸಿಗುತ್ತವೆ ಅದನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಇದೆಲ್ಲದರ ಲಿಂಕನ್ನು ವಿಡಿಯೋದ ಕೊನೆಯಲ್ಲಿ ನಿಮಗೆ ಕೊಡಲಾಗಿದೆ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ನಂತರ ನಾವು ತಿಳಿಸಿರುವ ಹಂತವನ್ನು ಮಾಡಿ ಕನ್ನಡ ಅಕ್ಷರಗಳಿಗೆ Kannada stylish fonts ಅನ್ನು ಹೇಗೆ ಕೊಡುವುದು ಎಂಬುದನ್ನು ನೀವು ತಿಳಿದುಕೊಳ್ಳಬಹುದು.

ಅಕ್ಷರಗಳಿಗೆ kannada stylish fonts ಕೊಡುವುದು ಹೇಗೆ

ಸ್ನೇಹಿತರೆ ನೀವು ಮೊದಲು ಕೆಳಗೆ ಕೊಟ್ಟಿರುವ Kannada Fonts zip file ಅನ್ನ ಡೌನ್ಲೋಡ್ ಮಾಡಿಕೊಳ್ಳಬೇಕು. ಡೌನ್ಲೋಡ್ ಮಾಡಿದ ನಂತರ ನೀವು ನಿಮ್ಮ ಫೈಲ್ ಮ್ಯಾನೇಜರ್ ಆಪ್ ನಲ್ಲಿ ಹೋಗಿ ಅದನ್ನು ಕಾಪಿ ಮಾಡಿ ಇಂಟರ್ನಲ್ ಸ್ಟೋರೇಜ್ ನಲ್ಲಿ ಹಾಕಬೇಕು. 

ನೀವು ಅದನ್ನು extract ಮಾಡಿದ ಹಾಗೆ ಆಗುತ್ತೆ, ಇತರ ಮಾಡುವುದರಿಂದ ನಾವು fonts ಚೇಂಜ್ ಮಾಡುವ ಅಪ್ಲಿಕೇಶನ್ ನಲ್ಲಿ ಫಾಂಟ್ಸ್ ಚೇಂಜ್ ಮಾಡುವಾಗ ಈ Zip file  ನಮಗೆ ಬೇಗ ಸಿಗುತ್ತದೆ.

ಸ್ನೇಹಿತರೇ, ಈಗ ನೀವು ಕೈನ್ ಮಾಸ್ಟರ್ ಆಫ್ ಅನ್ನು ಓಪನ್ ಮಾಡಿ, ಯಾವ ವಿಡಿಯೋಗೆ ಟೆಕ್ಸ್ಟ್ ಆಡ್ ಮಾಡಬೇಕು, ಟೆಕ್ಸ್ಟ್ ಆಪ್ಷನ್ ನಲ್ಲಿ ಹೋಗಿ ಮೊದಲಿಗೆ ಆಡ್ ಮಾಡಿಕೊಳ್ಳಬೇಕು. 
ನಂತರ fonts ಆಪ್ಷನ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ನಿಮಗೆ ಬಲ ಭಾಗದಲ್ಲಿ ಪ್ಲಸ್ ಚಿಹ್ನೆ ಕಾಣುತ್ತದೆ, ಅದರ ಮೇಲೆ ಓಕೆ ಮಾಡಬೇಕು. 

ಈಗ ನಿಮ್ಮ ಫೈಲ್ ಮೆನೇಜರ್ ಆಪ್ ನ folder ಗಳು ನಿಮಗೆ ಕಾಣುತ್ತವೆ, ನೀವು ಮೊದಲಿಗೆ Extract ಮಾಡಿದ kannada fonts zip file ಅನ್ನು ಹುಡುಕಿ ಓಕೆ ಮಾಡಬೇಕು.
ಓಕೆ ಮಾಡಿದ ಬಳಿಕ ನಿಮಗೆ ತುಂಬ fonts ಗಳು ಕಾಣುತ್ತವೆ, ನೀವು ಎಲ್ಲವನ್ನು ಸೆಲೆಕ್ಟ್ ಮಾಡಿ ಓಕೆ ಮಾಡಬೇಕು, ಆಗ ಎಲ್ಲ fonts ಗಳು ಕೈನ್ ಮಾಸ್ಟರ್ ಆಪ್ಲಿಕೇಷನ್ ನಲ್ಲಿ imopart ಆಗುತ್ತವೆ.

ಈಗ ನೀವು ಡೈರೆಕ್ಟ್ ಆಗಿ ನೀವು ಹಾಕಿರುವ ಟೆಕ್ಸ್ಟ್ ಗೆ ಪಾಂಟ್ಸ್ ಚೇಂಜ್ ಮಾಡೋಕೆ ಹೋದರೆ ಆಗಲ್ಲ, ಈಗ ನೀವು ಇನ್ನೊಂದು ಕೆಲಸವನ್ನು ಕೂಡ ಮಾಡಬೇಕು. ಒಂದು ವೆಬ್ಸೈಟ್ ಉಪಯೋಗಿಸಬೇಕು ಅಂತ ಹೇಳಿದ್ದೆ, ಕೆಳಗೆ ಲಿಂಕ್ ಕೊಡಲಾಗಿದೆ, ಆ ವೆಬ್ಸೈಟ್ ಗೆ ಒಮ್ಮೆ ಬೇಟಿ ನೀಡಿ, ಅಂದರೆ ಓಪನ್ ಮಾಡಬೇಕು. 

ಈಗ ನಿಮಗೆ ಈ ವೆಬ್ಸೈಟ್ ಸ್ಕ್ರೀನ್ ನಲ್ಲಿ ಎರಡು ಬಾಕ್ಸ್ ಗಳು ಕಾಣಲು ಸಿಗುತ್ತವೆ, ಮೊದಲು ಇರುವ ಬಾಕ್ಸ್ ಮೇಲೆ ಕ್ಲಿಕ್ ಮಾಡಿ, ಯಾವ ಟೆಕ್ಸ್ಟ್ ಗೆ ಪಾಂಟ್ಸ್ ಚೇಂಜ್ ಮಾಡಬೇಕು ಅದನ್ನು ಇಲ್ಲಿ ಹಾಕಬೇಕು.

ನಂತರ ಬಲ ಭಾಗದಲ್ಲಿ ಮೇಲೆ ಒಂದು ಆಪ್ಷನ್ ಇರುತ್ತದೆ, Unicode to ASCII ಅದರ ಮೇಲೆ ಟಿಕ್ ಮಾಡಿದಾಗ ಎರಡನೇ ಬಾಕ್ಸ್ ನಲ್ಲಿ ಒಂದು ಕೋಡ್ ಜನರೇಟ್ ಆಗುತ್ತದೆ, ಅದನ್ನು ಕಾಪಿ ಮಾಡಿ ಕೈನ್ ಮಾಸ್ಟರ್ ಆಪ್ ನಲ್ಲಿ ಬರಬೇಕು.

ಈಗ ನೀವು ಕೈನ್ ಮಾಸ್ಟರ್ ಆಪ್ ನಲ್ಲಿ ಬಂದು ಯಾವ ವಿಡಿಯೋಗೆ ಪಾಂಟ್ಸ್ ಚೇಂಜ್ ಮಾಡಬೇಕು, ಆ ವೀಡಿಯೋ ಸೆಲೆಕ್ಟ್ ಮಾಡಿ, ಅಲ್ಲಿ ನೀವು ಟೆಕ್ಸ್ಟ್ ಆಪ್ಷನ್ ಓಕೆ ಮಾಡಿ, ಬಳಿಕ ನೀವು copy ಮಾಡಿದ ಕೋಡ್ ಅನ್ನು ಪೇಸ್ಟ್ ಮಾಡಬೇಕು.

ಈಗ ನೀವು ಪಾಂಟ್ಸ್ ಆಪ್ಷನ್ ನಲ್ಲಿ ಹೋಗಿ ಯಾವುದೇ stylish kannada fonts ಅನ್ನು ಆಯ್ಕೆ ಮಾಡಿ apply ಮಾಡಿದರೆ, ನಿಮಗೆ ಆ ಕನ್ನಡದ ಟೆಕ್ಸ್ಟ್ ನಲ್ಲಿ ತುಂಬಾ ಸ್ಟೈಲಿಶ್ ಆಗಿ ಕಾಣುವುದು. ಈ ತರ  ಮಾಡಿ ಯಾವುದೇ ವೀಡಿಯೋಗಳಲ್ಲಿ ಕನ್ನಡ ಅಕ್ಷರಗಳಿಗೆ Kannada stylish fonts ಅನ್ನು ಸುಲಭಾಗಿ ಕೊಡಬಹುದು.

Kinemaster App : Go to Play Store

Unicode wabsiteGo To now

Kannada Fonts file : Download now 

Post a Comment

0 Comments